ಭಾರತ ಹಳ್ಳಿಗಳ ದೇಶ, ಕೃಷಿ ಪ್ರಧಾನ ರಾಷ್ಟ್ರ, ರೈತ ದೇಶದ ಬೆನ್ನೆಲುಬು, ನಮ್ಮ ದೇಶದಲ್ಲಿ ಹಲವಾರು ಬಗೆಯ ಭೂಪ್ರದೇಶವನ್ನು ಹೊಂದಿದರು ಇದು ಮೂಲತಃ ಮಳೆ ಆಶ್ರಿತ ವ್ಯವಸಾಯವನ್ನು ಹೊಂದಿದೆ ಅಂದರೆ ತಪ್ಪಾಗಲಾರದು. ಆದ್ದರಿಂದ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆ ಆರೋಗ್ಯಯುತವಾಗಿ ಬದುಕಿ ಬಾಳಬೇಕಾದರೆ ಒಳ್ಳೆಯ ನೀರು, ಆಹಾರ, ಸಿಗಬೇಕು ಅದು ನಮ್ಮ ರೈತರ ವರ್ಷದ ಕಠಿಣ ಪರಿಶ್ರಮದ ಫಲವಾಗಿದೆ. ನಮ್ಮ ರೈತರು ಸರಿಯಾದ ಸಮಯಕ್ಕೆ ಮಳೆ ಬಂದರೆ ಉತ್ತಮ ಬೆಳೆ ಬೆಳೆಯುತ್ತಾರೆ, ಅದು ಕೈಕೊಟ್ಟರೆ ವರ್ಷವಿಡಿ ಕಣ್ಣಿರಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ನಮ್ಮ ಯುವ ಭಾರತ ಸಮಿತಿ ವತಿಯಿಂದ ದೇಶದ ಬೆನ್ನೆಲುಬಾಗಿರುವ ರೈತನ ಹೆಗಲಿಗೆ ಕೊಟ್ಟು ಆತನಿಗೆ ಆಸರೆಯಾಗಲು, ಅಂತಹ ಕಷ್ಟಗಳನ್ನು ಎದುರಿಸುತ್ತಿರುವ ರೈತರಿಗೆ ಕೈಲಾದಷ್ಟು ಸಹಾಯ ಮಾಡಿ ಪರ್ಯಾಯ ಲಾಭದ ಮಾರ್ಗಗಳಿಂದ ಅವನ ಸಂಸಾರ ನಡೆಯುವ ಹಾಗೆ ನೋಡಿಕೊಂಡು ಕೃಷಿಯಲ್ಲಿ ಹೊಸ ಆವಿಷ್ಕಾರಗಳನ್ನು ತಂದು ಆತನ ಲಾಭವನ್ನು ದ್ವೀಗುಣಗೊಳಿಸುವ ಒಳ್ಳೆಯ ಉದ್ದೇಶವನ್ನು ಹೊಂದಿದೆ.