ಕನ್ನಡ ನಾಡಿನ ಅರಿವು, ಕಲೆ, ಸಾಹಿತ್ಯ, ಸಾಂಸ್ಕೃತಿಕ , ಆರೋಗ್ಯ ,ಕೃಷಿ , ಪರಿಸರ, ಸ್ವಚ್ಛತೆ ,ನೃತ್ಯ ,ಕಲೆ,ಸಂಗೀತ, ಭರತನಾಟ್ಯ , ಪಶು-ಪಕ್ಷಿ, ಐತಿಹಾಸಿಕ ಸ್ಥಳ, ಮಹಿಳೆಯರು, ಮಕ್ಕಳು , ಯುವಕರು, ವಯೋವೃದ್ಧರು, ಅಂಗವಿಕಲರು ,ಉದ್ಯೋಗ ತರಬೇತಿ ಸೇರಿದಂತೆ ಯುವ ಭಾರತ ಸಮಿತಿ ಸಂಘಟನೆಯ ಅಡಿಯಲ್ಲಿ ಹತ್ತು ಹಲವಾರು ಕ್ಷೇತ್ರದಲ್ಲಿ ಸಾಮಾಜಿಕವಾಗಿ ತೊಡಗಿಕೊಂಡು ಸಮಾಜಕ್ಕೆ ಒಳ್ಳೆಯದಾಗುವತ್ತ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿರುವುದು. ಯುವ ಭಾರತ ಸಮಿತಿಯ ಕೆಲಸ ಕಾರ್ಯಗಳನ್ನು ಗಮನಿಸಿ ೨೦೨೧ ನೇ ಸಾಲಿನ ವರ್ಷದ ವಿಜಯಪುರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಯುವ ಭಾರತ ಸಂಸ್ಥೆಗೆ ಸಿಕ್ಕಿರುವುದರಿಂದ ನಮ್ಮಲ್ಲಿ ಇನ್ನು ಹೆಚ್ಚಿನ ಸಾಮಾಜಿಕ ಕೆಲಸಗಳನ್ನು ಮಾಡಲು ಪ್ರೇರೆಪಿಸಿದಂತಾಗಿದೆ. ಧನ್ಯವಾದಗಳು