ಭಾರತೀಯರಾದ ನಾವುಗಳು ಹಲವಾರು ನಂಬಿಕೆಗಳನ್ನು ಇಟ್ಟುಕೊಂಡಿದ್ದೇವೆ, ಪ್ರಕೃತಿಯನ್ನು ಭಗವಂತನೆಂದು ಪೂಜಿಸುವ ನಮ್ಮ ಜನರ ಗುಣವೇ ಇಂದು ಅರಣ್ಯದ ಉಳಿವಿಗೆ ಕಾರಣವಾಗಿವೆ. ಆದರೆ ಇಂದಿನ ಜಾಗತೀಕರಣ, ಉದ್ಯೋಗಿಕರಣ, ನಗರಿಕರಣದ ಹೆಸರಿನಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ಒತ್ತುವರಿಯಿಂದಾಗಿ ಹೆಚ್ಚುತ್ತಿರುವ ಅರಣ್ಯನಾಶದಿಂದ ಪ್ರಕೃತಿಯಲ್ಲಿ ಏರುಪೇರಾಗುತ್ತಿರುವುದು ನಾವೆಲ್ಲ ಕಾಣತ್ತೇವೆ, ಇದು ಹೀಗೆ ಮುಂದುವರೆದರೆ ಜಾಗತಿಕ ತಾಪಮಾನ ಹೆಚ್ಚಾಗಿ ಇಡೀ ಭೂಮಂಡಲವೇ ನೀರಲ್ಲಿ ಮುಳುಗಿ ಹೋಗುವುದರಲ್ಲಿ ಸಂಶಯವಿಲ್ಲ ಎನ್ನುವ ವಿಜ್ಞಾನಿಗಳ ಮುನ್ನೆಚರಿಕ್ಕೆಗೆ ಬೆಲೆ ಕೊಟ್ಟು ನಾವು ನೀವೆಲ್ಲರು ಸೇರಿ ಸಕಲವನ್ನು ನಮಗೆ ಉಚಿತವಾಗಿ ಧಾರೆ ಎಳೆದುಕೊಟ್ಟು ಈ ಭೂ ತಾಯಿಗೆ ಕೈಲಾದಷ್ಟು ಮರಳಿಸೋಣ, ಇದಕ್ಕಾಗಿಯೇ “ಯುವ ಭಾರತ ಸಮಿತಿ” ವತಿಯಿಂದ ವಿಶ್ವ ಪರಿಸರ ದಿನಾಚರಣೆ ಮಾತ್ರವಲ್ಲದೇ ಪ್ರತಿವರ್ಷ ಲಕ್ಷಾಂತರ ಸಸಿಗಳನ್ನು ಹಚ್ಚವುದರ ಮೂಲಕ “ಹಸಿರು ಭಾರತ” ಎಂಬ ಪರಿಕಲ್ಪನೆಯೊಡನೆ 2014ರಿಂದ ಅವಿರತವಾಗಿ ಸಸಿ ನೆಡುವ ಕಾರ್ಯ ಮಾಡುತ್ತಾ ಬಂದಿರುತ್ತೆವೆ.