ಕನ್ನಡ ದಿನ ಪತ್ರಿಕೆ ವಿಜಾಪುರ ಜಮ್ಮು ಮತ್ತು ಕಾಶ್ಮಿರ ಬಾಂಧವರಿಗಾಗಿ ನಿಧಿ ಸಂಗ್ರಹ ವಿಜಾಪುರ: ಸಪ್ಟಂಬರ್ 4 2014ರಂದು ಆರಂಭಗೊಂಡ ಬಾರಿ ಮಳೆಯಕಾರಣದಿಂದ ಉಂಟಾದ ಭೀಕರ, ಪ್ರವಾಹಕ್ಕೆ ಜಮ್ಮು ಮತ್ತು ಕಾಶ್ಮಿರ ನಲುಗಿ ಹೊಗಿದೆ. ಝಿಲಂ ಮತ್ತು ತವಿ ನದಿ ಸೇರಿದಂತೆ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ರಾಜೌರಿ, ಪುಂಚ, ಪುಲ್ವಾಮ, ಬಾರಾಮುಲ್ಲಾ ಸೇರಿದಂತೆ ಅನೇಕ ಜಿಲ್ಲೆಗಳ ಸಾವಿರಾರು ಗ್ರಾಮಗಳು ಜಲಾವೃತ ಗೊಂಡಿವೆ ರಸ್ತೆ, ಶಾಲೆ, ಆಸ್ಪತ್ರೇ, ಅಂಗಡಿ, ದೇಗುಲಗಳು ದರಾಶಾಹಿಯಾಗಿವೆ. ಕೃಷಿ ಭೂಮಿ, ಜಾನುವಾರುಗಳು ಕೊಚ್ಚಿಹೊಗಿವೆ. 200 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಹಸ್ರಾರು ಜನರು ಭಿಕರ ಪ್ರಳಯದಿಂದ ಸಂತ್ರಸ್ಥರಾಗಿದ್ದಾರೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. ಈಗಾಗಲೇ ಅನೇಕ ಸಂಘ, ಸಂಸ್ಥೆಗಳು ಪರಿಹಾರ ಕಾರ್ಯಚರಣೆಗೆ ಮುಂದಾಗಿದ್ದಾರೆ. ಅದೇರಿತಿ ವಿಜಾಪುರ ಜಿಲ್ಲೆಯಲ್ಲಿ ಯುವ ಭಾರತ ಸಂಘಟನೆ ವತಿಯಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಮ್ಮು ಮತ್ತು ಕಾಶ್ಮಿರ ಪ್ರವಾಹ ಸಂತ್ರಸ್ಥರಿಗೆ, ಉದಾರ ದೇಣಿಗೆ ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಯುವ ಭಾರತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ ಗೋ. ಕಾರಜೋಳ, ಮಾಜಿ ಕೇಂದ್ರ ಸಚಿವರಾದ ಬಸನಗೌಡ ಪಾಟೀಲ ಯತ್ನಾಳ, ಕೃಷ್ಣಾ ಗುನ್ನಾಳಕರ, ರಾಘು ಅಣ್ಣಿಗೇರಿ, ವಿನೋದಕುಮಾರ ಮಣೂರ, ಸತೀಶ ಬಾಗಿ, ವಿರೇಶ ಗೋಬ್ಬುರ, ಗೀರಿಶ ಕುಲಕರ್ಣಿ, ಸಂತೋಷ ಝಳಕಿ, ಶ್ರೀಶೈಲ ಗಿರಡೆ, ಮುತ್ತು ಝಳಕಿ, ಸಾಗರ ಗಾಯಕವಾಡ, ಸಚಿನ ಗಾಯಕವಾಡ, ಪ್ರಶಾಂತ ಅಗಸರ, ಅಮೀತ ದೇಶಪಾಂಡೆ, ಪ್ರಭು ಕಂಬಿಮಠ ಹಾಗೂ ರಾಜು ಗಣಿ, ಭಿಮು ಗೊಳಸಂಗಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು. ಎಮದು ಪತ್ರಿಕಾ ಪ್ರಕಟಣೆಯಲ್ಲಿ ಉಮೇಶ ಕಾರಜೋಳ ತಿಳಿಸಿದ್ದಾರೆ.