Our work on Health

Health - ಆರೋಗ್ಯ

ಮಾನವನ ಜೀವನದಲ್ಲಿ ಆರೋಗ್ಯ ಎಂಬುದು ಅತೀ ಮುಖ್ಯವಾಗಿ ಬೇಕೆ ಬೇಕು, ಏಕೆಂದರೆ ಈ ಜೀವನದಲ್ಲಿ ಎಲ್ಲವನ್ನು ಸಲಿಸಾಗಿ ಗಳಿಸಬಹುದು, ಆದರೆ ಒಮ್ಮೆ ಆರೋಗ್ಯ ಕೆಟ್ಟಿತೆಂದರೆ ಅದನ್ನು ಮೊದಲಿನ ಹಾಗೆ ಮಾಡಲು ಹರಸಾಹಸ ಪಡಬೇಕಾಗುವುದು. ‘ಆರೋಗ್ಯವೇ ಭಾಗ್ಯ’ ಎಂದು ನಮ್ಮ ಹಿರಿಯರು ಬಹಳ ಹಿಂದಿನಿಂದಲು ಆರೋಗ್ಯದ ಕುರಿತು ಕಿವಿ ಮಾತನ್ನು ಹೇಳುತ್ತಾ ಕೆಟ್ಟವರ ಸಹವಾಸ ಮಾಡಬಾರದು, ಅಂತವರಿಂದ ಕೆಟ್ಟ ಚಟಗಳನ್ನು ಕಲಿಯಬಹುದು ಎಂಬ ಎಚ್ಚರಿಕೆಯನ್ನು ಕೊಡುತ್ತಾ ಬಂದಿರುವುದನ್ನು ಇಲ್ಲಿ ಗಮನಿಸಬಹುದು. ಈ ಕುರಿತು ‘ಯುವ ಭಾರತ ಸಮಿತಿ’ ವತಿಯಿಂದ ಇಂದಿನ ಆಧುನಿಕ ಪ್ರಾಪಂಚಿಕ ಜೀವನಕ್ಕೆ ಬೆನ್ನು ಹತ್ತಿದ ಯುವ ಪೀಳಿಗೆ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಒತ್ತಡದ ಜೀವನ ನಡೆಸುತ್ತಿರುವವರಿಗೆ ಸಹಾಯಕವಾಗಲಿ ಎಂದು ‘ವ್ಯಸನ ಮುಕ್ತ ಭಾರತ’ ಎಂಬ ಅಭಿಯಾನ ಆರಂಭಿಸಿ ಆಗಾಗ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಕಾಲ ಕಾಲಕ್ಕೆ ಸಿಗಬಹುದಾದ ಹಣ್ಣು ಹಂಪಲಗಳನ್ನು ಎತ್ತೆಚವಾಗಿ ಸೇವಿಸಲು ತಿಳಿಸಿ, ಮಾದಕ ವಸ್ತುಗಳನ್ನು ಸೇವಿಸುವದರಿಂದ ಆಗುವ ಕೆಟ್ಟ ಪರಿಣಾಮಗಳ ಕುರಿತು ತಿಳಿಸುವ ಕಾರ್ಯ ಮಾಡುಲಾಗುತ್ತಿದೆ.