ವಿಜಯಪುರ:- ನಗರದ ಸಿದ್ದೇಶ್ವರ ರಸ್ತೆಯಲ್ಲಿರುವ ಕಿರಾಣಾ ಬಜಾರ್ ಹತ್ತಿರ ಯುವ ಭಾರತ ಸಂಘಟನೆಯ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವ ಹಾಗೂ ವಿಜಯಪುರದ ವಿಜಯೋತ್ಸವನ್ನು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಪಾದಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ ಕಾರಜೋಳ ಮಾತನಾಡುತ್ತಾ ಇಂದು ನವೆಂಬರ 01 ಹರಿದು ಹಂಚಿ ಹೊಗ್ಗಿದ್ದ ಕನ್ನಡ ಭಾಷೆಯ ಭೂ ಪ್ರದೇಶಗಳು ಭಾವನಾತ್ಮಕ ಬಂದಕದ ನೆರವಿನೊಂದಿಗೆ ಒಂದು ಗೂಡಿ 1956 ನವೆಂಬರ್ 01 ರಂದು ಅಖಂಡ ಕನ್ನಡ ನಾಡಿಗಾಗಿ ರೂಪಗೊಂಡಿದ್ದರ ಸಂಭ್ರಮಾಚಾರಣೆ ಹಾಗೂ ಇಂತಹದೊಂದು ಏಕೀಕರಣಕ್ಕೆ ಶ್ರಮಿಸಿದ ಹಲವು ಮಹನಿಯರನ್ನು ನೆನೆಯುವುದು, ಇಂದು ನಡೆಯುತ್ತಿದೆ.
ಇದೇ ಕನ್ನಡ ರಾಜ್ಯೋತ್ಸವ ಎಂಬ ಹಿಗ್ಗಿನ ಹಬ್ಬ. ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣಕ್ಕೆ ಹಲವು ಮಹನಿಯರ ಕಾಣಿಕೆ ಇದೆ. ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು 1905 ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಗೆ ಚಾಲನೆ ಕೊಟ್ಟಾಗ ಇದ್ದ ಸನ್ನಿವೇಶಕ್ಕೂ ಇಂದಿಗೂ ಬಹಳ ಅಂತರವಿದೆ ಆದರೂ ‘ಕನ್ನಡಿಗರು’ ಅಂದು ಎದುರಿಸುತ್ತಿದ್ದ ಸಮಸ್ಯೆಗಳಲ್ಲಿ ಕೆಲವು ಇಂದಿಗೂ ಮುಂದುವರೆದುಕೊಂಡು ಬಂದಿವೆ ಎಂಬ ಅಪ್ರೀಯ ಸತ್ಯವನ್ನು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ರಾಜ್ಯೋತ್ಸವದ ಆಚರಣೆ ಸಂಭ್ರಮಕಷ್ಟೆ ಸೀಮಿತವಾಗದೆ ಕರ್ನಾಟಕದ ವರ್ತಮಾನ ಸಮಸ್ಯೆ ಹಾಗೂ ಸವಾಲುಗಳ ಕುರಿತು ಚಿಂತನೆ ನಡೆಸುವ ಪರ್ವಕಾಲವಾಗಬೇಕು. ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿ ಯಾಗಿರುವುದನ್ನು ಅಲ್ಲಗಳಿಯುವಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿರುವುದು ಪ್ರಮುಖ ಸಮಸ್ಯೆಗಳೆನಿಸಿವೆ. ಇದಕೊಂದು ತಾರ್ಕಿಕ ಅಂತ್ಯ ನೀಡದ ಹೊರತು ರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗದು ಎಂದರು.
ಇದೇ ಸಂದರ್ಭದಲ್ಲಿ ವಿಜಯಪುರ ಹೊರಾಟ ಸಮಿತಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊರಾಟ ಸಮಿತಿಯ ಅಧ್ಯಕ್ಷ ಆನಂದ ಕುಲಕರ್ಣಿ ಐತಿಹಾಸಿಕ ನಗರಕ್ಕೆ ವಿಜಯಪುರ ಹೆಸರು ಅಂತಿಮಗೊಳಿಸುವ ಮೂಲಕ ರಾಜ್ಯ ಸರ್ಕಾರವು ವಿಜಯಪುರ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಸಂಭ್ರಮ ಇಮ್ಮಡಿಗೊಳಿಸಿದೆ. ಜಿಲ್ಲೆಯ ಇತಿಹಾಸ ಪೂರಕ ದಾಖಲಾತಿಗಳು ಜನರ ಭಾವನೆ ಪರಿಗಣಿಸಿ ರಾಜ್ಯ ಸರ್ಕಾರ ನಗರಕ್ಕೆ ವಿಜಯಪುರ ಎಂದು ಮರು ನಾಮಕರಣ ಮಾಡುವ ಐತಿಹಾಸಿಕ ನಿರ್ಧಾರ ತಗೆದುಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಾದ ವಿನೋದಕುಮಾರ ಮಣೂರ, ಸತೀಶ ಬಾಗಿ, ವಿರೇಶ ಗೊಬ್ಬೂರ, ಗಿರೀಶ ಕುಲಕರ್ಣಿ, ಸಾಗರ ಗಾಯಕವಾಡ, ಶ್ರೀಶೈಲ ಗೆರಡೆ, ರಾಹುಲ ಕಾರಜೋಳ, ಸಂತೋಷ ಬಂಗಾರಿ, ಸಂತೋಷ ಝಳಕಿ, ಶ್ರೀಕಾಂತ ರಾಠೋಡ, ಭೀಮು ಗೊಳಸಂಗಿ, ಸಂಜೀವ ಅಷ್ಠಪುತ್ರೆ , ಶರಣು ಶೆಟ್ಟಿ, ವಿಶ್ವಾ ಗಾಯಕವಾಡ, ಮುತ್ತುರಾಜ ಝಳಕಿ, ಕೃಷ್ಣಾ ಕುಲಕರ್ಣಿ, ಆನಂದ ಪಾಟೀಲ, ಸಂತೋಷ ಗುಜರಿ, ಆಶೀಶ ಜಾಧವ, ಪರಸು ಪೂಜಾರಿ, ವಿವೇಕ ಡಬ್ಬಿ, ಬಸವಾರಜ ಕರಿಕಬ್ಬಿ, ಬಾಬುರಾವ, ಬಾಹುರಾಜ ಹೂಗಾರ, ಮುಂತಾದವರು ಹಾಜರಿದ್ದರು.