Swachh Bharat Abhiyan

ಯುವ ಭಾರತ ಸಂಘಟನೆಯವತಿಯಿಂದ ಕನ್ನಡ ರಾಜ್ಯೋತ್ಸವನ್ನು ವಿಜಯಪುರದಲ್ಲಿ ಸಂಭ್ರಮಾಚರಣೆಯಿಂದ ಆಚರಿಸಲಾಯಿತು.

ವಿಜಾಪುರ: ನಗರದ ಗಾಂಧಿ ಚೌಕಿನಲ್ಲಿರುವ ರೇಡಿಯೋ ಮೈದಾನದಲ್ಲಿ ಸ್ವಚ್ಚ ಭಾರತ ಅಭಿಯಾನವನ್ನು ಯುವ ಭಾರತ ಸಂಘಟನೆಯಿಂದ ನೇರವೆರಿಸಲಾಯಿತು. ಕಸ ಮುಕ್ತ ಭಾರತಕ್ಕಾಗಿ ಪತಿಯೊಬ್ಬ ನಾಗರಿಕ ಸ್ವಚ್ಚ ಅಭಿಯಾನದಲ್ಲಿ ಪಾಲ್ಗೋಳ್ಳುವಂತೆ ಯುವ ಭಾರತ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಉಮೇಶ ಗೋ. ಕಾರಜೋಳ ಕರೆ ನೀಡಿದರು.

ರೇಡಿಯೋ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಅಭಿಯಾನದಲ್ಲಿ ಪಾಲ್ಗೋಂಡು ಮಾತನಾಡಿದರು ನಮ್ಮ ದೇಶ ಕಸದಿಂದ ಮುಕ್ತವಾಗಿ ಶುಬ್ರ ದೇಶವಾಗಲು ಪ್ರತಿಯೊಬ್ಬ ನಾಗರಿಕ ಸ್ವಚ್ಚತಾ ಅಭಿಯಾನದಲ್ಲಿ ಕೈ ಜೊಡಿಸಬೇಕು. ಹಾಗೂ ಮಹಾತ್ಮಾ ಗಾಂಧಿಜಿಯವರ ಕನಸನ್ನು ನನಸು ಮಾಡುವದು ನಮ್ಮ ಗುರಿಯಾಗಬೇಕು ಎಂದರು.

ನಮ್ಮ ಮನೆ, ಆವರಣ, ಬೀದಿಗಳನ್ನು ಸುಚಿಯಾಗಿಟ್ಟುಕೊಂಡರೆ ದೇಶ ಶುಭ್ರಗೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿ ಜಯಂತಿ ಎಂದು ಘೋಷಿಸಿರುವ ಸ್ವಚ್ಚತಾ ಅಭಿಯಾನಕ್ಕೆ ಅಭೋತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಅವರ ಆಶಯದಂತೆ ನಾಲ್ಕು ವರ್ಷಗಳಲ್ಲಿ ಕಸಮುಕ್ತ ದೇಶದವಾಗಲಿದೆ ಎಂದರು. ಜೊತೆಗೆ ಪ್ರತಿಯೊಬ್ಬರು. ಸ್ವಚ್ಚತೆಗಾಗಿ ಸಮಯ ಮಿಸಲೀಡಬೇಕು ಆರೋಗ್ಯವಂತ ವಾತಾವರಣ, ನಿರ್ಮಾಣ ಹಾಗೂ ರೋಗವನ್ನು ತಡೆಗಟ್ಟುವಲ್ಲಿ ಸ್ವಚ್ಚತೆಯ ಪ್ರಾಮುಕ್ಯತೆ ಬಹಳಷ್ಟು ಇದೆ ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ನೂರಾರು ಕಾಯಕರ್ತರು ಸೇರಿ ರೇಡಿಯೋ ಮೈದಾನವನ್ನು ಸ್ವಚ್ಚ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಾದ ವಿನೋದಕುಮಾರ ಮಣೂರ, ದಯಾಸಾಗರ ಪಾಟೀಲ, ಸತಿಶ ಬಾಗಿ, ವಿರೇಶ ಗೊಬ್ಬೂರ, ಶ್ರೀಶೈಲ ಗೇರಡೆ, ಸಂತೋಷ ಬಂಗಾರಿ, ಸಾಗರ ಗಾಯಕವಾಡ, ಈರಯ್ಯ ಹುಣಸಗಿಮಠ, ಸಚಿನ ಗಾಯಕವಾಡ, ಸಂಜೀವ ಅಷ್ಟಪುತ್ರೆ, ಆನಂದ ಡಿಂಗರಿ, ಬಾಬುರಾವ ಘತ್ತರಗಿ, ಬಸವರಾಜ ಕರಿಕಬ್ಬಿ, ರವಿ ಪೂಜಾರಿ, ಕೃಷ್ಣ ಕುಲಕರ್ಣಿ, ಭೀಮು ಗೊಳಸಂಗಿ, ಸೇರಿದಂತೆ ಅನೇಕ ಕಾರ್ಯಕರ್ತರು ಸ್ವಚ್ಚ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿನೋದಕುಮಾರ ಮಣೂರ, ತಿಳಿಸಿದ್ದಾರೆ.

Event Location