Vijayapur Protest

ವಿಜಯಪುರವಾಗಲಿ ನಮ್ಮ ಊರು : ಉಮೇಶ. ಗೋ. ಕಾರಜೋಳ

ವಿಜಾಪುರ: ಜಿಲ್ಲೆಯ ಈಗ ಇರುವ ಹೆಸರು ಅರ್ಥರಹಿತವಾಗಿದೆ. ಸುಲ್ತಾನ ಮಹಮ್ಮದನ ಆಳ್ವಿಕೆಯ ಕಾಲ (1626-56) ರಲ್ಲಿ ಮಹ್ಮದಿಪುರ ಎಂದು ನಾಮಕರಣ ಮಾಡಲಾಯಿತು. ಇದೇ ಆದೀಲ ಶಾಹಿಗಳ ಕಾಲದಲ್ಲಿ ದರೂಲ್‍ಜಾಫರ್ ಎಂದು ಕರೆಯಲಾಯಿತು. ಹೀಗೆ ಈ ನೆಲವನ್ನು ಕುರಿತು ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲು ಪ್ರಯತ್ನಿಸಿದರು.

ಮೂಲ ವಿಜಯಪುರ ಎನ್ನುವುದೇ ಘಟ್ಟಿಯಾಗಿ ನೆಲೆಯೂರಿ ಇಂದಿಗೂ ಬಿಜಾಪುರವಾಗಿ ಉಳಿದು ಬಂದಿದೆ. ಬ್ರೀಟಿಷರು “ವಿಜಯ” ಸ್ಥಾನದಲ್ಲಿ ಬಿಜಯ ಎಂದು ಬಳಿಸಿರುವುದರಿಂದ ಬಿಜಾಪೂರ ಎಂದು ಕರೆದಿದ್ದಾರೆ. ಬಿಜಾಪೂರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ವಿಜಾಪೂರ ಜಿಲ್ಲೆಯ ಐತಿಹಾಸಿಕ ಘಟಣಾವಳಿಗಳ ಫಲಕ 1ರಲ್ಲಿ ಹಿಂದೆಯೇ ಬಿಜಾಪೂರವನ್ನು ವಿಯಪುರವೆಂದು ಉಲ್ಲೇಖಿಸಲಾಗಿದೆ. ವಿಜಯಪುರವು ಸುಲ್ತಾನರ ಮತ್ತು ಬ್ರೀಟಿಷರ ಆಳ್ವಿಕೆಯಲ್ಲಿ ಬಾಯತಪ್ಪಿನಿಂದ ಆಡುಭಾಷೆಯಲ್ಲಿ ಅದನ್ನು ವಿಜಾಪೂರ/ ಬಿಜಾಪೂರ ಎಂದು ಬಳಿಸಿಕೊಂಡಿದ್ದಾರೆ. ಆದಕಾರಣ ನಮ್ಮ ವಿಜಯದ ಊರು ಐತಿಹಾಸಿಕ ಭವ್ಯ ಪರಂಪರೆವುಳ್ಳ ನಗರವನ್ನು ವಿಜಯಪುರ ಎಂದು ಮರು ನಾಮಕರಣ ಮಾಡುವುದೇ ಸೂಕ್ತವಾಗಿದೆ ಎಂದು ಯುವಭಾರತ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ. ಗೋವಿಂದ ಕಾರಜೋಳ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ರಾಜ್ಯದ 12 ನಗರಗಳ ಹೆಸರು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಅದರಲ್ಲಿ ವಿಜಾಪುರ ಹೆಸರು ಸೇರಿದೆ. ಈ ನಗರದ ಹೆಸರನ್ನು ವಿಜಾಪುರ ಅಥವಾ ವಿಜಯಪುರವೆಂದು ಮರುನಾಮಕರಣ ಕೇಂದ್ರ ಸರ್ಕಾರ ಈಗಾಗಲೇ ನಿರೇಕ್ಷಪಣಾ ಪತ್ರ ನೀಡಿದೆ. ಆದಕಾರಣ ಇವು ಎರಡರಲ್ಲಿ ಯಾವ ಹೆಸರು ನಿಡಬೇಕೆಂಬ ಗೊಂದಲ ರಾಜ್ಯಸರ್ಕಾರದ ಮುಂದೆ ಇದ್ದು, ವಿಜಯಪುರ ಎಂಬ ಹೆಸರೇ ಸೂಕ್ತವಾಗಿದೆ ಅದರಲ್ಲು ವಿಜಯಪುಯರ ಎಂಬ ಹೆಸರು ಪ್ರಾಚೀನವಾಗಿದ್ದು, ಆದ ಕಾರಣ ವಿಜಯಪುರ ಎಂದು ಜಿಲ್ಲೆಗೆ ಮರು ನಾಮಕರಣ ಮಾಡಬೇಕೇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈಗಾಗಲೇ ಪತ್ರವನ್ನು ಬರೆಯಲಾಗಿದೆ.

ಕಾರಣ ವಿಜಾಪುರ ಜಿಲ್ಲಾದಿಕಾರಿಗಳು ಕೂಡಲೇ ವಿಜಾಪುರವನ್ನು ವಿಜಯಪುರವೆಂದು ನಾಮಕರಣ ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಮೂಲಕ ಜಿಲ್ಲೆಗೆ ನ್ಯಾಯ ಒದಗಿಸಬೇಕಾಗಿದೆ. ಹಾಗೆ ರಾಜ್ಯ ಸರ್ಕಾರ ಕೂಡಲೇ ವಿಜಯಪುರವೆಂದು ಮರುನಾಮಕರಣ ಮಾಡಿ ಆದೇಶ ಹೋರಡಿಸಬೇಕೆಂದು ಯುವ ಭಾರತ ಸಂಘಟನೆ ಆಗ್ರಹಿಸಿದೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಮೇಶ ಕಾರಜೋಳ ತಿಳಿಸಿದ್ದಾರೆ.

Event Location