Abhyas Vargha Ashram

ಪತ್ರಿಕಾ ಪಕ್ರಟಣೆ ಕೃಪೆಗಾಗಿ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಯುವ ಭಾರತ ಹಾಗೂ ಯುವ ಬ್ರಿಗೇಡ್ ವಿಜಯಪುರ ಸಂಘಟನೆಯ ವತಿಯಿಂದ “ಅಮೃತ ಹಬ್ಬ ಸಾವಿರದ ಸ್ವಾಮಿ ವಿವೇಕಾನಂದ” ಜಯಂತಿಯ ಕುರಿತು ಅಭ್ಯಾಸ ವರ್ಗವನ್ನು ಜ್ಞಾನ ಯೋಗಾಶ್ರಮದ ಶ್ರೀ. ಶಾಂತ ಮಲ್ಲಿಕಾರ್ಜುನ ಸ್ವಾಮಿಯವರು ಉದ್ಘಾಟಿಸಿದರು ಮತ್ತು ಮುಖ್ಯ ಅತಿಥಿಗಳಾಗಿ ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಭಾರತ ವಿಜಯಪುರ ಸಂಘಟನೆಯ ಸಂಸ್ಥಾಪಕ ಅಧಕ್ಷರಾದ ಶ್ರೀ. ಉಮೇಶ. ಗೋ. ಕಾರಜೋಳರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಚಕ್ರವರ್ತಿ ಸೂಲಿಬೆಲೆಯವರು ಅಭ್ಯಾಸ ವರ್ಗದ ಶಿಭಿರಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ 152ನೇ ಜಯಂತಿಯ ಆಚರಣೆ ಕುರಿತು. ಆಯೋಜಕ ಹಾಗೂ ಭಾಷಣಕಾರರ ವರ್ಗಗಳಿಗೆ ಉಪನ್ಯಾಸ ನೀಡಿದ ಅವರು ಸ್ವಾಮಿ ವಿವೇಕಾನಂದರ 152ನೇ ಜಯಂತಿಯನ್ನು ಕರ್ನಾಟಕದಾದ್ಯಂತ ಏಕಕಾಲಕ್ಕೆ 1000 ಸ್ಥಳದಲ್ಲಿ ಆಚರಿಸುವ ಉದ್ದೇಶ ಹೊಂದಿದ್ದು, ಅದನ್ನು “ಅಮೃತ ಹಬ್ಬ : ಸಾವಿರದ ವಿವೇಕಾನಂದ” ಎಂದು ಹೆಸರಿಡಲಾಗಿದೆ. ಇದರಲ್ಲಿ ಯುವ ಭಾರತ ವಿಜಯಪುರ ಸಂಘಟನೆವತಿಯಿಂದ ಜಿಲ್ಲೆಯಾದ್ಯಂತ ಎಲ್ಲಾ 152 ಸ್ಥಳದಲ್ಲಿ ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ಸಂಪೂರ್ಣ ಕಾರ್ಯಕ್ರಮದ ಮುಖ್ಯ ಉದ್ದೇಶ ಹಾಗೂ ಗುರಿ ಎಂದರೆ, ಸ್ವಾಮಿ ವಿವೇಕಾನಂದÀರ ಚಿಂತನೆ ಹಾಗೂ ಆದರ್ಶಗಳನ್ನು ನಾಡಿನ ಎಲ್ಲ ಜನತೆಗೂ ಹಾಗೂ ವಿದ್ಯಾರ್ಥಿಗಳಿಗೂ ಮುಟ್ಟಿಸುವುದು. ಆದ ಕಾರಣ ಅಭ್ಯಾಸ ವರ್ಗದ ಶಿಭಿರಾರ್ಥಿಗಳಲ್ಲಿ ಎರಡು ಗುಂಪುಗಳನ್ನು ಮಾಡಿ ಅದರಲ್ಲಿ ಆಯೋಜಕ ವರ್ಗಕ್ಕೆ ಕಾರ್ಯಕ್ರಮಗಳನ್ನು ಎಲ್ಲಿ ಹಾಗೂ ಯಾವ ಸ್ಥಳದಲ್ಲಿ ಆಚರಿಸಬೇಕು ಮತ್ತು ಹೇಗೆ ಆಚರಿಸಬೇಕೆಂದು ಸಲಹೆ ನೀಡಿದರು. ಇನ್ನೊಂದು ವರ್ಗವಾದ ಭಾಷಣಕಾರರ ವರ್ಗಕ್ಕೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಸಂಪೂರ್ಣವಾಗಿ ತಿಳಿಸಿ, ಅದರಲ್ಲಿ ಶಾಲೆ ಮಕ್ಕಳ ಮುಂದೆ ಯಾವ ರೀತಿ ಮಾತನಾಡಬೇಕು ಹಾಗೂ ಯುವಕರು ಹಾಗೂ ಹಿರಿಯ ನಾಗರಿಕರ ಮುಂದೆ ಹೇಗೆ ಮತನಾಡಬೇಕು ಎಂದು ಸಲಹೆ ನೀಡಿದರು. ಈ ಅಭ್ಯಾಸ ವರ್ಗದಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ಹಳ್ಳಿಗಳ ಯುವ ಭಾರತ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರಾದ ವಿನೋದಕುಮಾರ ಮಣೂರ, ಸಂತೋಷ ಬಂಗಾರಿ, ವಿರೇಶ ಗೊಬ್ಬೂರ, ಗಿರೀಶ ಕುಲಕರ್ಣಿ, ಸಂತೋಷ ಝಳಕಿ, ಶ್ರೀಶೈಲ ಗರಡಿ, ಚೇತನ ಕೊಪ್ಪದ, ಪ್ರಶಾಂತ ಅಗಸರ, ಅಮೀತ ದೇಶಪಾಂಡೆ, ಸಾಗರ ಗಾಯಕವಾಡ, ಭೀಮು ಗೊಳಸಂಗಿ, ರಾಘವೇಂದ್ರ ವಿಜಯಪುರ, ಸಂತೋಷ ಬಂಡೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂದು ವಿನೋದಕುಮಾರ ಮಣೂರ ಇವರು ತಿಳಿಸಿದ್ದಾರೆ.