Mumbai Attack

26/11 ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ : ಯುವ ಭಾರತ ಸಂಘಟನೆ, ವಿಜಯಪುರ. ನಂ. 26 ವಿಜಯಪುರ ನಗರದ ಶ್ರೀ. ಸಿದ್ದೇಶ್ವರ ದೇವಸ್ಥಾನದ ಎದುರಿಗೆ ಮುಂಬಯಿ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯುವ ಭಾರತ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಉಮೇಶ. ಗೋ. ಕಾರಜೋಳರವರು ಮಾತನಾಡುತ್ತಾ, ಮುಂಬಯಿ ಮೇಲಿನ ಉಗ್ರರ ದಾಳಿಯ ಕರಾಳ ನೆನಪಿಗೆ ಇಂದಿಗೆ 6 ವರ್ಷವಾಯಿತು. ಇದೇ ದಿನದಂದು ಮುಂಬಯಿನಲ್ಲಿ ನಡೆದ ಘಟನೆ ಇಡೀ ವಿಶ್ವವನ್ನೆ ಬೆಚ್ಚಿ ಬಿಳೀಸಿತು. ದಾಳಿಯ ಸಂದರ್ಭದಲ್ಲಿ ಹುತಾತ್ಮರಾದ ಮೇಜರ್. ಸಂದೀಪ. ಉನ್ನೀಕೃಷಣನ, ಅಶೋಕ ಕಾಮಠೆ, ಹೇಮಂತ ಕರಕರೆ, ವಿಜಯ ಸಲಾಸ್ಕರ, ತುಕಾರಾಮ ಓಂಬಳೆ ಇನ್ನೂ ಅನೇಕ ಸೈನಿಕರು ದಾಳಿಯ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ್ದಾರೆ ಅಂದರು. ಇದೇ ಸಂದರ್ಭದಲ್ಲಿ ವಿಜಯಪುರ ನಗರದ ಸಿ.ಪಿ.ಐ. ಚಂದ್ರಶೇಖರವರು ಮಾತನಾಡುತ್ತಾ 2008 ನಂ. 26 ರಂದು ಸಮುದ್ರದ ಮೂಲಕ ಭಾರತದೊಳಗೆ ನುಸಿಳಿದ ಪಾಕಿಸ್ತಾನದ 10 ಉಗ್ರರು ಮುಂಬಯಿನ ತಾಜ್ ಹೋಟೆಲ್ ಸೇರಿದಂತೆ ವಿದೇಶಿಯರೇ ಹೆಚ್ಚಾಗಿರುವ ಹಲವು ಸ್ಥಳಗಳಿಗೆ ನುಗ್ಗಿ 166 ಜನರನ್ನು ಹತ್ಯೆಗೈದಿದ್ದರು. ಈ ಘಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಉಗ್ರರ ಜೊತೆಗಿನ ಕಾಳಗದಲ್ಲಿ ಎನ್‍ಕೌಂಟರ್ ಸ್ಪೇಶಲಿಸ್ಟ ವಿಜಯ ಸಾಲಸ್ಕರ, ಎ.ಟಿ.ಎಸ್. ಮುಖ್ಯಸ್ಥ ಹೇಮಂತ ಕರಕರೆ, ಅಶೋಕ ಕಾಮಠೆ, ಎನ್.ಎಸ್.ಜಿ. ಕಮಾಂಡೋ ಸಂದೀಪ. ಉನ್ನೀಕೃಷ್ಣನ್ ಸೇರಿದಂತೆ ಹಲವರು ತಮ್ಮ ಪ್ರಾಣವನ್ನು ದೇಶಕ್ಕಾಗಿ ತ್ಯಾಗಮಾಡಿದ್ದಾರೆ. ಅವರನ್ನು ನಾವೆಲ್ಲರೂ ನೆನೆಯಬೇಕು. ಇದೇ ಸಂದರ್ಭಲ್ಲಿ ರಾಘವ ಅಣ್ಣೀಗೇರಿ ಮಾತನಾಡುತ್ತಾ, ಮುಂಬಯಿ ದಾಳಿಯಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಕಸಬ್‍ನನ್ನು ಕಳೆದ ವರ್ಷವಷ್ಟೆ ಗಲ್ಲಿಗೇರಿಸಲಾಗಿತ್ತು. ಇದೀಗ ಈ ಕರಾಳದಿನ ಮರುಕಳಿಸಬಾರದು ಇಂದು ದಾಳಿಯಾಗಿ 6 ವರ್ಷ ಕಳೆದಿದೆ ಆದರೆ ಪಾಕಿಸ್ತಾನದಲ್ಲಿರುವ ದಾಳಿಯ ರೂವಾರಿಗಳನ್ನು ಮಾತ್ರ ಬಂಧಿಸಲು ಸಾಧ್ಯವಾಗಿಲ್ಲ ಎಂದರು. ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರಾದ ವಿನೋದಕುಮಾರ ಮಣೂರ, ವಿರೇಶ ಗೊಬ್ಬೂರ, ಸತೀಶ ಬಾಗಿ, ಗಿರೀಶ ಕುಲಕರ್ಣಿ, ಸಂತೋಷ ಬಂಗಾರಿ, ಸಂತೋಷ ಝಳಕಿ, ಶ್ರೀಶೈಲ ಗರಡೆ, ಸಂಗಮೇಶ ಹೌದೆ, ಶ್ರೀಶೈಲ ಹುಟಗಿ, ಕೃಷ್ಣಾ ಗುನ್ನಾಳಕರ, ವಿಶ್ವನಾಥ ತೆಲಸಂಗ, ಸಂತೋಷ ದೊಡಮನಿ, ಆನಂದ ಕುಲಕರ್ಣಿ, ಸಾಗರ ಗಾಯಕವಾಡ, ಸಚೀನ ಗಾಯಕವಾಡ, ಅಪ್ಪು ನಾಗಠಾಣ, ಮಹೇಶ ಕುಂಬಾರ, ಶರಣಬಸಪ್ಪ ಕುಂಬಾರ, ಮಯೂರ ತಿಳಗೂಳಕರ, ಕೃಷ್ಣಾ ಕುಲಕರ್ಣಿ, ಚೇತನ ಕೊಪ್ಪದ, ಇನ್ನೂ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು