Geeta Abhiyan

ಸುಡುವುದು ದೇಹ ಆತ್ಮವಲ್ಲ ಭಗವದ್ಗೀತಾ ಅಭಿಯಾನ: ಯುವ ಭಾರತ ವಿಜಯಪುರ ವಿಜಯಪುರ: 21.03.2015 ನಗರದ ಜ್ಞಾನಯೋಗಾಶ್ರಮದಲ್ಲಿ ಹಿಂದುಗಳ ಹೊಸ ವರ್ಷ ಯುಗಾದಿಯಂದು ಯುವ ಭಾರತ ಸಂಘಟನೆ ಇಂದ ಭಗವದ್ಗೀತಾ ಅಭಿಯಾನ ಮಾಡಲಾಯಿತು ಈ ಸಂದರ್ಬದಲ್ಲಿ ಸುಡುವುದು ದೇಹ ಆತ್ಮವಲ್ಲ ಎಂಬ 18 ಅದ್ಯಾಯ ಉಳ್ಳ ಕಿರು ಪುಸ್ತಕವನ್ನು ಬಿಡುಗಡೆ ಮಾಡಿ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನಿಡಿದ ಜ್ಞಾನಯೋಗಾಶ್ರಮದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡುತ್ತಾ ಭಗವದ್ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದಲ್ಲ, ಇದು ಮಾನವನ ಜೀವನ ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ. ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಷ್ಟೆ ಅಲ್ಲ. ಅದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರತಂರ ಹೋರಾಟದ ಚಿತ್ರಣ. ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೇಯಿಂದ ತೆರೆದುಕೊಳ್ಳುತ್ತದೆ. ಭಗವದ್ಗೀತೆ ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮಹಾಭಾರತದ ಸಾರವನ್ನು ಕಟ್ಟಿಕೋಡುತ್ತದೆ. ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸವಲ್ಲ, ಬದಲಿಗೆ ಮನ:ಶಾಸ್ತ್ರ ಮತ್ತು ಆದ್ಯಾತ್ಮ ಎಂದರು ಈ ಸಂದರ್ಭದಲ್ಲಿ ಯುವ ಭಾರತ ಸಂಘಟನೆಯ ಸಂಸ್ಥಾಪಕ ಅದ್ಯಕ್ಷರಾÀದ ಉಮೇಶ ಗೋ ಕಾರಜೋಳ ಮಾತನಾಡುತ್ತಾ ಭಗವದ್ಗೀತೆ ಪ್ರತಿಯೊಬ್ಬರ ಉಪಯೋಗಕ್ಕಾಗಿಯೂ ಇದೆ.ಉನ್ನತ ಆದ್ಯಾತ್ಮಿಕ ಲಾಭಗಳಿಗೆ ಮಾತ್ರವಲ್ಲದೆ, ಆ ಗುರಿಯನ್ನು ತಲುಪಲು ಪುಟ್ಟ ಪುಟ್ಟ ಹೆಜ್ಜೆಗಳಾದ ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೂ ಗೀತೆ ಮರ್ಗದರ್ಶನ ಮಾಡುತ್ತದೆ. ಆದುನಿಕ ದಾವಂತದ ಬದುಕಿನಲ್ಲಿ ಮಾನವನ ಮುಖ್ಯ ಸಮಸ್ಯೆ ಎಂದರೆ ನಿರ್ವಹಣೆಯದ್ದು. ನಾವು ಇಂದು7 ಯಾವುದನ್ನು ಸರಿಯಾಗಿ, ಸಮರ್ಥವಾಗಿ ನಿರ್ವಹಿಸಲಾಗದ ಅಶಕ್ತ ಸ್ಥಿತಿಯಲ್ಲಿದೆವೆ. ನಾವು ನಮ್ಮ ಆರ್ಥಿಕತೆಯನ್ನು ನಿರ್ವಹಿಸಲಾರೆವು. ಸಾಮಾಗಿಕ ಜವಾಬ್ದಾರಿಯನ್ನು ನಿರ್ವಹಿಸಲಾರೆª. ಸಂಬಂಧಗಳಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲಾರೆವು. ಸಮಯ ನಿರ್ವಹಣೆಯಂತೂ ನಮ್ಮ ಕೈಮಿರಿದ ಸಂಗತಿ. ಎಲ್ಲ ಬಿಡಿ ನಮ್ಮ ಕೋಪವನ್ನು ಕೂಡ ನಾವು ನಿರ್ವಹಿಸಲಾರೆವು. ಭಗವದ್ಗೀತೆಯು ನಮಗೆ ಎಲ್ಲವನ್ನು ನಿರ್ವಹಿಸುವ ಸಮಗ್ರ ಸೂತ್ರವಗಿ ಒದಗಿಬರತ್ತದೆ ಎಂದರು ಆದರೆ ಇತ್ತಿಚಿಗೆ ಒಂದಷ್ಟು ಬುದ್ದಿವಂತರು ಗೀತೆಯನ್ನು ಸುಡಬೇಕೆಂದು ಹೇಳಿ ಪುಗಸಟ್ಟೆ ಪ್ರಚಾರ ಪಡೆಯುತ್ತಿದ್ದಾರೆ ಆದರೆ ಶ್ರೀ ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳುತ್ತಾನೆ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಬೆಂಕಿಯು ಸುಡಲರದು, ನೀರು ತೇವ ಮಡಲಾರದು ಮತ್ತು ಗಾಳಿಯು ಒಣಗಿಸಲರದು ಎಂದು. ಗೀತೆಯು ಭಾರತದ ಆತ್ಮ. ಅದನ್ನು ಸುಡಬಲ್ಲ ಅಗ್ನಿ ಹುಟ್ಟೇ ಇಲ್ಲವಲ್ಲ ಇಷ್ಟಕ್ಕೂ ಬೆಂಕಿಯನ್ನು ಸುಡುವುದು ಹೇಗೆ ಸಾದ್ಯ ಹೇಳಿ ಎಂದರು ಈ ಸಂದರ್ಭದಲ್ಲಿ ಯುವ ಭಾರತ ಸಂಘಟನೆಯ ಕಾರ್ಯಕರ್ತರಾದ ವಿನೋದಕುಮಾರ ಮಣೂರ,ಸತೀಶ ಬಾಗಿ,ವಿರೇಶ ಗೋಬ್ಬೂರ ,ಸಂತೋಷ ಝಳಕಿ, ಗಿರಿಷ ಕುಲಕರ್ಣೀ,ಅರುಣ ಮಸಳಿ,ಮಹೇಶ ನಿವರಗಿ,ಸುರೇಶ ಗಣಕಿ,ರಮೇಶ ಗುಳಗಿ,ಅಮೃತ ಸಾವಳಗಿ,ಹಾಗು ಕಾರ್ಯಕರ್ತರು ಇದ್ದರು