Cashless Training

ವಿಜಯಪುರ : ದಿನಾಂಕ : 6-1-2016ರಂದು ಯುವಾ ಬ್ರಿಗೇಡ್ ಸಂಘಟನೆಯಿಂದ ಟರ್ನಿಂಗ್ ಪಾಯಿಂಟ್ ಕಂಪ್ಯೂಟರ್ ಸೆಂಟರ್‍ನಲ್ಲಿ ಕ್ಯಾಶ್‍ಲೇಸ್ ವ್ಯವಹಾರದ ಕುರಿತು ಕಾರ್ಯಗಾರ ಮಾಡಲಾಯಿತು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್‍ನ ಶಿವಜೀತ್ ಮೈಸೂರ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ನೋಟುಗಳ ಅಮಾನ್ಯಗೊಳಿಸಿ ನಾಗರಿಕರಿಗೆ ಕ್ಯಾಶ್‍ಲೇಸ್ (ನಗದು ರಹಿತ) ವ್ಯವಹಾರವನ್ನು ಅಳುವಡಿಸಿಕೊಳ್ಳಲು ವಿನಂತಿಸಿಕೊಂಡಿದ್ದು. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಗದು ರಹಿತ ವ್ಯವಹಾರವು ಜಾರಿಗೆ ಬರುವ ಸೂಚನೆಯನ್ನು ನೀಡಿದ್ದಾರೆ. ನಗದು ರಹಿತ ವ್ಯವಹಾರಗಳಿಂದ ಮುಂದಿನ ದಿನಗಳಲ್ಲಿ ಸದಸ್ಯಕ್ಕೆ ಇದ್ದ ಶೇ. 80 ಪ್ರತಿಷತ ದೇಶದ ಸಮಸ್ಯೆಗಳು ಬಗೆಹರಿಸಿಕೊಳ್ಳಬಹುದಾಗಿದೆ. ಆದ್ದರಿಂದ ಯುವಾ ಬ್ರಿಗೇಡ್ ಹೊಸದೊಂದು ಸಾಹಸಕ್ಕೆ ಕೈ ಹಾಕುತ್ತಿದ್ದೆ, ಭಾರವನ್ನು ಕ್ಯಾಶ್‍ಲೇಸ್ ಮಾಡುವ, ತನ್ಮೂಲಕ ದೇಶವನ್ನು ಬ್ರಷ್ಠಾಚಾರ ಮುಕ್ತವನ್ನಾಗಿಸುವ ಪ್ರಧಾನಮಂತ್ರಿಗಳ ಕನಸನ್ನು ನನಸುಮಾಡುವ ಸಲುವಾಗಿ ಕರ್ನಾಟಕ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಜನಸಾಮಾನ್ಯರಿಗೆ ಬ್ಯಾಂಕ್, ಎ.ಟಿ.ಎಂ. ಕಾರ್ಡ, ಡೆಬಿಟ್ ಕಾರ್ಡ, ಪೇಟಿಎಂ., ಎಸ್.ಬಿ.ಎಂ. ಬಡ್ಡಿ, ರುಪೈ ಕಾರ್ಡ, ಕೀಸಾನ್ ಕಾರ್ಡ, ಆಧಾರ ಕಾರ್ಡ, ಕ್ರೆಡಿಟ್ ಕಾರ್ಡ ಇತ್ಯಾದಿಗಳನ್ನು ಬಳಸುವ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ವ್ಯಾಪಕವಾಗಿ ಆಯೋಜಿಸಲು ತಿರ್ಮಾನಿಸಲಾಗಿದೆ, ಅಕ್ಷರಶಃ ಯುದ್ದದ ಸಂದರ್ಭದಂತೆ ಅತೀ ಚುರುಕಾಗಿ ಈ ಕಾರ್ಯ ನಡೆಯಬೇಕಾಗಿದೆ. ಅದಕ್ಕಾಗಿ ಯುವಾ ಬ್ರಿಗೇಡ್‍ನ ದೇಶಭಕ್ತ ವಿದ್ಯಾವಂತ ಯುವಕರು ಹಳ್ಳಿ ಹಳ್ಳಿಗಳಿಗೆ ಹೋಗಿ ಜನರಿಗೆ ತರಬೇತಿ ನೀಡಲು ತಯಾರಾಗಬೇಕಾಗಿದೆ, ಆಗ ರಾಷ್ಟ್ರವನ್ನು ಕ್ಯಾಶ್‍ಲೇಸ್ ಮಾಡುವ ಮೂಲಕ ಬ್ರಷ್ಠಾಚಾರ ಮುಕ್ತವನ್ನಾಗಿಸುವ ಕನಸನ್ನು ನನಸುಗೊಳಿಸಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್‍ನ ರಾಜ್ಯ ಸಹ ಸಂಚಾಲಕ ವಿನೋದಕುಮಾರ ಮಣೂರ, ವಿಭಾಗ ಸಂಚಾಲಕ ಸಂತೋಷ ಬಂಗಾರಿ, ಜಿಲ್ಲಾ ಸಂಚಾಲಕ ಸತೀಶ ಬಾಗಿ, ಕಾರ್ಯರ್ತರಾದ ವಿರೇಶ ಗೊಬ್ಬೂರ, ಗಿರಿಶ ಕುಲಕರ್ಣಿ, ಚೇತನ ಪಾಟೀಲ, ರವಿ ದೇಗಿನಾಳ, ರವಿ ಪೂಜಾರಿ, ಸಾಗರ ಗಾಯಕವಾಡ, ಆನಂದ ಬಂಗಿನವರ, ಅಕ್ಷಯಕುಮಾರ, ಅಮೀತ ದೇಶಪಾಂಡೆ ಹಾಗೂ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು