Raksha Bandhan

ವಿಜಾಪೂರ ನಗರದ ಟಕ್ಕೆಯಲ್ಲಿರುವ ಬಾಲಮಂದಿರ (ಅನಾಥಾಶ್ರಮ)ದಲ್ಲಿ ಯುವ ಭಾರತ ವಿಜಯಪುರ ಸಂಘಟಣೆಯವರು ಅನಾಥ ಮಕ್ಕಳಿಗೆ “ರಕ್ಷಾ ಬಂಧನ ” ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಯುವ ಭಾರತ ಸಂಘಟಣೆಯ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ ಕಾರಜೋಳ ಇವರು ಮಾತನಾಡುತ್ತಾ ಭಾರತೀಯ ಸಂಸ್ಕøತಿಯಲ್ಲಿ ಸಹೋದರನಿಗೆ ಸಹೋದರಿಯು ಕಟ್ಟುವ ರಾಖಿಯನ್ನು ರಕ್ಷಾ ಬಂಧನ ಎಂದು ಕರೆಯಲಾಗುತ್ತದೆ. ಈ ದಿನ ಸಹೋದರಿಯು ತನ್ನ ಸಹೋದರ ಅಥವಾ ಯಾವದೇ ಅಪಾಯದಿಂದ ತನ್ನನ್ನು ರಕ್ಷಸುವ ವ್ಯಕ್ತಿಗೆ ಸಹೋದರನ ಸ್ಥಾನ ನೀಡಿ ಆತನಿ ರಾಖಿ ಕಟ್ಟುತ್ತಾಳೆ. ರಾಖಿ ಕಟ್ಟುವದು ಕೇವಲ ಸಹೋದರ ಮತ್ತು ಸಹೋದರಿಗೆ ಮಾತ್ರ ಸೀಮಿತವಾಗಿಲ್ಲ ಬಹುಸಂಸ್ಕøತಿಯ ಸಮಾಜದಲ್ಲಿ ಇದು ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ, ಆದರೆ ನಾವು ರಾಖಿ ಏಕೆ ಕಟ್ಟುತ್ತೇವೆ ಭಾರತದ ಅನೇಕ ಗ್ರಂಥಗಳು, ಇತಿಹಾಸ ಮತ್ತು ಜಾನಪದಗಳಲ್ಲಿ ಇದರ ಬಗ್ಗೆ ಹಲವಾರು ಕಾರಣಗಳಿವೆ ಹಿಂದು ಪುರಾಣದ ಪ್ರಕಾರ ರಾಖಿ ಕಟ್ಟುವ ಸಂಪ್ರದಾಯದ ಆರಂಭವು ಸಮಾಜವು ಉತ್ತಮವಾಗಿ ಕಾರ್ಯ ನಿರ್ವಹಿಸಲು ಮತ್ತು ಜನರಿಗೆ ನಂಬಿಕೆ ಉಂಟುಮಾಡಲು ಆರಂಭಿಸಲಾಗಿತ್ತು, ರಾಖಿ ಅಥವಾ ರಕ್ಷಾ ಬಂಧನ ದೇವಸ್ಥಾನದಲ್ಲಿ ಪೂಜಾರಿಯು ಪೂಜೆಗಳನ್ನು ನಿರ್ವಹಿಸಿದ ಬಳಿಕ ಕಟ್ಟಲಾಗುತ್ತದೆ. ವರ್ಷದ ಎಲ್ಲಾ ಸಮಯದಲ್ಲಿ ವ್ಯಕ್ತಿಯನ್ನು ಆಪತ್ತುಗಳಿಂದ ರಕ್ಷಿಸಲು ಕಟ್ಟಲಾಗುತ್ತದೆ. ಶ್ರಾವಣದ ಜುಲೈ ಅಗಷ್ಟ ತಿಂಗಳುಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಭವಿಷ್ಯ ಪುರಾಣದ ಕಥೆಯಂದರಲ್ಲಿ ಇರುವ ಪ್ರಕಾರ ರಾಕ್ಷಸರ ವಿರುದ್ಧ ಎಲ್ಲಾ ಯುದ್ಧಗಳಲ್ಲಿ ಸೋತು ಬಂದ ಇಂದ್ರ ತನ್ನ ಆತ್ಮವಿಶ್ವಾಸ ಕಳೆದುಕೊಂಡು ಖಿನ್ನನಾಗಿ ತನ್ನ ಅರಮನಿಗೆ ಬಂದಿದ್ದ ಈ ವೇಳೆ ಆತನ ಪತ್ನಿ ತನ್ನ ಗುರುವಿನ ಸಲಹೆಯಂತೆ ಒಂದು ದಾರವನ್ನು ತೆಗೆದುಕೊಂಡು ಅದನ್ನು ಪವಿತ್ರಗೊಳಿಸಿ ಇಂದ್ರನ ಕೈಗೆ ಕಟ್ಟುತ್ತಾಳೆ. ಇದರಿಂದ ಇಂದ್ರನು ಖಿನ್ನತೆಯಿಂದ ಹೊರಬಂದು ರಾಕ್ಷಸರನ್ನು ಸಂಹರಿಸುತ್ತಾನೆ. ಕಾಲ ಬದಲಾದರೂ ಬಂಧನ ಹಾಗೇ ಇದೆ ರಾಖಿ ಕಟ್ಟುವ ಸಂಪ್ರದಾಯದ ಬಗ್ಗೆ ಹಲವಾರು ಕಥೆಗಳು ಮತ್ತು ಜಾನಪದ ಕಥೆಗಳಿವೆ ಇತಿಹಾಸದ ದಂತಕಥೆಗಳಾದ ರಾಣಿ ಕರ್ಣವತಿ ಮತ್ತು ರಾಜ ಹುಮಾಯೂನ, ಅಲಕ್ಸಾಂಡರ್ ಮತ್ತು ರಾಜ ಪುರ, ಇದರಲ್ಲಿ ಒಳಗೊಂಡಿದ್ದಾರೆ. ಗುಜರಾತಿನ ಸುಲ್ತಾನ ತಮ್ಮ ರಾಜ್ಯದ ಮೇಲೆ ದಾಳಿಮಾಡಿದಾಗ ರಾಣಿ ಕರ್ಣವತಿಯು ಹುಮಾಯೂನನಿಗೆ ರಾಖಿಯನ್ನು ಕಟ್ಟಿ ಕಳುಹಿಸುತ್ತಾಳೆ. ರಾಖಿಯ ಮಹತ್ವವನ್ನು ತಿಳಿದ ಹುಮಾಯೂನ್, ರಾಣಿ ಕರ್ಣವತಿಗೆ ನೆರವಾಗುತ್ತಾನೆ. ಪುರು ರಾಜನನ್ನು ಸೋಲಿಸಲು ಅಲಕ್ಸಾಂಡರ್‍ನಿಗೆ ಸಾಧ್ಯವಾಗುವದಿಲ್ಲ ತನ್ನ ಪತಿಯ ಸೇನೆ ಸಂಕಷ್ಟದಲ್ಲಿ ಇದೆ ಎಂದು ತಿಳಿದ ಅಲಕ್ಸಾಂಡರ್‍ನ ಪತ್ನಿ ರಕ್ಷಾ ಬಂಧನದ ಸಂಸ್ಕøತಿಯನ್ನು ತಿಳಿದು ಪುರು ರಾಜನಿಗೆ ರಾಖಿ ಕಳುಹಿಸುತ್ತಾಳೆ, ಪುರು ರಾಜನು ಆಕೆಯನ್ನು ತನ್ನ ತಂಗಿ ಎಂದು ಭಾವಿಸಿ ಅಲಕ್ಸಾಂಡರ್‍ನೊಂದಿಗಿನ ಹೋರಾಟವನ್ನು ನಿಲ್ಲಿಸುತ್ತಾನೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ರಾಖಿ ಕಟ್ಟುವ ಬಗ್ಗೆ ಹಲವಾರು ಪುರಾಣ ಮತ್ತು ಜನಪದ ಕಥಗಳು ನಿಮಗೆ ಸಿಗುತ್ತವೆ, ಆದರೆ ಸಂಕೇತ ಮಾತ್ರ ಒಂದೇ ಆಗಿರುತ್ತದೆ. ರಾಖಿಯು ಸೌಹಾರ್ದತೆ ಮತ್ತು ಶಕ್ತಿಯ ಸಂಕೇತವಾಗಿದೆ. ಇದನ್ನು ತಿಳಿದುಕೊಂಡು ಇಂದಿನ ಯುವಕರು ಸಮಾಜದಲ್ಲಿರುವ ಹೆಣ್ಣುಮಕ್ಕಳನ್ನು ಗೌರವದಿಂದ ಸಹೋದರಿಯರಂತೆ ಕಾಣಬೇಕು ಹಾಗೂ ಅವರ ರಕ್ಷಣೆಯು ನಮ್ಮ ನಿಮ್ಮೆಲ್ಲರ ಹೊಣೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯುವ ಭಾರತ ಸಂಘಟಣೆಯ ಕಾರ್ಯಕರ್ತರಾದ ವಿನೋದಕುಮಾರ ಮಣೂರ, ಸತೀಶ ಬಾಗಿ, ಸಾಗರ ಗಾಯಕವಾಡ, ವೀರೇಶ ಗೊಬ್ಬೂರÀ, ಶ್ರೀಶೈಲ ಗಿರಡೆ, ರಾಹುಲ ಕಾರಜೋಳ, ಚನ್ನು ಝಳಕಿ, ಭೀಮು ಗೊಳಸಂಗಿ, ಬಸವರಾಜ ಕರಿಕಬ್ಬಿ, ಆನಂದ ಡಿಂಗ್ರೆ, ರಾಜಶೇಕರ ಪಾಟೀಲ, ಅವಧೂತ ಛತ್ರೆ, ವಿಕಾಸ ದರಬಾರ, ಸ್ಪೂರ್ತಿ ಅಷ್ಟಪುತ್ರೆ , ಶ್ರೀಮತಿ ಶ್ರೀದೇವಿ ಕಾರಜೋಳ ಶ್ರೀಮತಿ ಜೋತಿ ಗೊಬ್ಬೂರ, ಪೂಜಾ ಬಾಗಿ, ಪಲ್ಲವಿ ಬಾಗಿ, ಪೂಜಾ ಕಾಂಬಳೆ, ದಾನಮ್ಮ ಜಾಲಿಬೆಂಚಿ, ಮತ್ತು ಬಾಲಮಂದಿರದ ಬಾಲಕರು ಹಾಗೂ ಸಿಂಬಂಧಿ ವರ್ಗದವರು ಪಾಲ್ಗೊಂಡಿದ್ದರು.