Bhagat Singh Jayanti

ಭಗತಸಿಂಗ ಎಂದರೆ ಒಂದು ಯುವ ಶಕ್ತಿ: ಉಮೇಶ ಕಾರಜೋಳ ವಿಜಾಪುರ: ನಗರದ ಬಿಎಲ್‍ಡಿಇ ರಸ್ತೆಯ ಗಚ್ಚಿನಕಟ್ಟಿ ಕಾಲೋನಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಯುವ ಭಾರತ ಹಾಗೂ ಸ್ವತಂತ್ರ ಯುವಕ ಸೇವಾ ಸಂಘ, ಇವರ ಸಂಯುಕ್ತ ಆಶ್ರಯದಲ್ಲಿ ಶಹಿದ್ ಭಗತಸಿಂಗರವರ 107 ನೇ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚಣೆಮಾಡಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು ಈ ಸಂದರ್ಭದಲ್ಲಿ ಯುವ ಭಾರತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ ಕಾರಜೋಳ ಮಾತನಾಡುತ್ತಾ ಭಗತಸಿಂಗ ಎಂದರೆ ಕೆವಲ ವ್ಯಕ್ತಿಯಲ್ಲ ಆತ ಒಂದು ಚೈತನ್ಯ ಪೂರ್ಣ ಯುವಶಕ್ತಿ, ಭಗತಸಿಂಗರನ್ನು ನಾವು ಕೆಲವ ಒಂದು ವ್ಯಕ್ತಿಯಾಗಿ ನಮ್ಮ ಇತಿಹಾಸದಲ್ಲಿ ಬನ್ನಿಸಿದ್ದೇವೆ. ಭಗರತಸಿಂಗ ಎಂದರೆ ಒಂದು ಯುವ ಶಕ್ತಿ ಎಂದು ತಿಳಿಸುವಲ್ಲಿ ಸ್ವಾಭಿಮಾನವೆ ಸತ್ತಂತಿರುವ ನಮ್ಮ ಗುಲಾಮಿ ಮಾನಸಿಕತೆಯು ಸಂಪೂರ್ಣ ಸೋತಿದೆ. ಭಗತಸಿಂಗ ನೇತಾಜಿ, ಸಾರ್ವಕರಂತಹ ದೂರ ದೃಷ್ಟಿಯುಳ್ಳ ನಾಯಕರಾಗಿದ್ದರು. ಭಗತಸಿಂಗ ಬೇರೆ ಎಲ್ಲರಂತೆ ಸ್ವತಂತ್ರ್ಯ ಭಾರತದ ಕನಸು ಕಾಣಲಿಲ್ಲ, ಅವರು ಸ್ವತಂತ್ರ್ಯ ನಂತರ ಭಾರತ ಹೇಗಿರಬೇಕೆಂದು ಕನಸು ಕಂಡಿದ್ದರು. ಅವರು ಸದಾ ದೇಶದ ಬಗ್ಗೆ ಚಿಂತಿಸುತ್ತಿದ್ದರು. ತನ್ನ ದೇಶದ ಮುಂದಿನ ಪಿಳಿಗೆ ಸದಾ ಸುಖಃವಾಗಿರಬೇಕೆಂದು ಬಯಸುತ್ತಿದ್ದರು. ಹಾಗಾಗಿಯೆ ನಾನು ಅವರನ್ನು ಒಂದು ಯುವಶಕ್ತಿ ಎಂದು ಸಂಭೋದಿಸಿದ್ದು, ಇವತ್ತು ನಮ್ಮ ಯುವ ಜನತೆ ಭಗತಸಿಂಗ ಎಂಬ ಶಕ್ತಿಯ ಹೆಸರನ್ನೆ ಮರೆತು ಬಿಟ್ಟಿದ್ದಾರೆ. ಬೆರೆಳೆಣಿಕೆ ಎಷ್ಟು ಜನ ಭಗತಸಿಂಗ ಎಂದರೆ ಸ್ವತಂತ್ರ್ಯ ಹೊರಾಟಗಾರ, ದೇಶದ ಸ್ವತಂತ್ರ್ಯಕ್ಕಾಗಿ ಮಡಿದರು ಎಂಬುವುದನ್ನು ಅರೆತಿರಬಹುದು, ಭಗತಸಿಂಗರ ತತ್ವಗಳು, ಆದರ್ಶಗಳು, ಮತ್ತು ನಾವು ಅವರ ಬಗ್ಗೆ ಅರಿಯದ ಸತ್ಯಗಳು ಬಹಳಷ್ಟು ಇದೆ. ಈ ನಿಟಿನಲ್ಲಿ ಆ ಸತ್ಯಗಳನ್ನು ತಿಳಿಸುವುದು. ಯುವ ಭಾರತ ತಂಡದ ಆಶಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸ್ವತಂತ್ರ ಯುವಕ ಸೇವಾ ಸಂಘದ ಅಧ್ಯಕ್ಷರಾದ ಪ್ರಭು ಕಂಬಿಮಠ, ಯುವ ಭಾರತ ಸಂಘಟನೆ ಕಾರ್ಯಕರ್ತರಾದ ವಿನೋದಕುಮಾರ ಮಣೂರ, ವಿರೇಶ ಗೊಬ್ಬುರ, ಸತೀಶ ಬಾಗಿ, ಸಾಗರ ಗಾಯಕವಾಡ, ಗಿರಿಶ ಕುಲಕರ್ಣಿ, ಶ್ರೀಶೈಲ ಗೇರಡೆ, ಸಚಿನ ಗಾಯಕವಾಡ, ಸಂತೋಷ ಝಳಕಿ, ಭೀಮು ಗೋಳಸಂಗಿ, ರಾಹಲ ಕಾರಜೋಳ, ಚೇತನ ಕೋಪ್ಪದ, ಅರುಣ ಮಸಳಿ, ಸಚಿನ, ಅಕ್ಷಯ ಸಗರಿ, ಸುರೇಶ ಗುಣಕಿ, ವಿಜಯಕುಯಮಾರ, ಮಹೇಶ ನಿವರಗಿ, ಸಮೀರಕುಮಾರ ಚಿಪ್ಪಲಕಟ್ಟಿ, ಸಿದ್ದು ಅಲಾಲ, ಶರಣು ಶೆಟ್ಟಿ, ಮುತ್ತು ಮಸಳಿ, ಮಲ್ಲಯ್ಯ ಮಠ, ಸುನಿಲ ಕ್ಷಿರಸಾಗರ, ಬಸು ಹಡಪದ, ವಿರೇಶ ಬಳುತಿಮಠ, ರಾಜಶೇಖರ ಬಳುತಿಮಠ, ಸಂಗಮೇಶ ಮುಂತಾದ್ದವರು ಉಪಸ್ಥಿತರಿದ್ದರು