Kargil Vijayotsav

ವಿಜಾಪುರ: ಯುವ ಭಾರತ ವಿಜಯಪುರ ಸಂಘಟನೆಯಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದ ಎದುರು ಕಾರ್ಗಿಲ ಯುದ್ಧಲ್ಲಿ ಮೃತಪಟ್ಟ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚಣೆಮಾಡುವ ಮೂಲಕ ಹಾಗೂ ಪಟಾಕ್ಷಿ ಸಿಡಿಸಿ ಸಿಹಿ ಹಂಚುವ ಮೂಲಕ 15ನೇ ಕಾರ್ಗಿಲ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ ಕಾರಜೋಳ ಮಾತನಾಡುತ್ತಾ ನಮ್ಮ ದೇಶದ ರಕ್ಷಣೆಯಲ್ಲಿ ಯೋಧರ ಪಾತ್ರಬಹುಮುಖ್ಯವಾಗಿದೆ. ಈ ಹಿಂದೆ ಶತೃ ರಾಷ್ಟ್ರ ಮತ್ತು ಭಾರತದ ನಡುವೆ ನಡೆದ ಕಾರ್ಗಿಲ ಯುದ್ಧದಲ್ಲಿ ನಡೆದದ್ದು ಒಟ್ಟು 74 ದಿನಗಳ ಘನ ಘೋರಯುದ್ಧ ದಿನಕ್ಕೆ ಸರಾಸರಿ 15 ಕೋಟಿ ರೂಪಾಯಿಗಳನ್ನು ನಮ್ಮ ಸೇನೆ ಖರ್ಚುಮಾಡಿತು. ಯುದ್ಧ ಮುಗಿದು ಗೆಲುವಿನ ನಗೆ ಬಿರುವ ಹೊತ್ತಿಗೆ, ಆದ ಒಟ್ಟು ವೆಚ್ಚ 1100 ಕೋಟಿಗಳ ಗಡಿ ದಾಟ್ಟಿತ್ತು. ಖರ್ಚಾದ ದುಡ್ಡಿನ ಲೇಕ್ಕ ಅಷ್ಟುದೋಡ್ಡ ವಿಷಯವೇನಲ್ಲ ಆದರೆ ಯುದ್ಧದ ವೇಳೆ ನಾವು ಕಳೆದುಕೋಂಡ ನಮ್ಮ ಯೋಧರ ಜೀವದ ಲೇಕ್ಕ ಇದೆಯಲ್ಲಾ ಅದಕ್ಕೆ ಯಾರಿಂದಲು ಬೇಲೆಕಟ್ಟಲು ಸಾಧ್ಯವಿಲ್ಲ ಭಾರತದ 20 ಸಾವಿರಕ್ಕು ಹೆಚ್ಚು ಯೋಧರು ಪ್ರಾಣದ ಹಂಗು ತೋರೆದು ಯುದ್ಧವನ್ನೆನೋ ಗೆದ್ದರು, ಆದರೆ ಅಷ್ಟೋತ್ತಿಗೆ ನಮ್ಮ 527 ಯೋಧರು ರಣರಂಗದಲ್ಲೆ ಪ್ರಾಣಚೆಲ್ಲಿ ವೀರ ಸ್ವರ್ಗಸೇರಿದ್ದರು 1300ಕ್ಕು ಹೆಚ್ಚು ಯೋಧರು ಗಾಯಾಳುಗಳಾದರು ಅವರಲ್ಲಿ ಬಹಳಷ್ಟು ಮಂದಿ ಶಾಸ್ವತವಾಗಿ ಕಣ್ಣು ಕೈಕಾಲುಗಳನ್ನು ಕಳೆದುಕೊಂಡು ಪರಾವಲಂಭಿಗಳಾದರು. ಈ ಸಂದರ್ಭದಲ್ಲಿ ನಮ್ಮ ಎಷ್ಟೋ ಸೈನಿಕರಾದಂತಹ ಕ್ಯಾಪ್ಟನ್ ವಿಕ್ರಮ ಬಾತ್ರಾ, ಯೋಗೇಂದ್ರಸಿಂಗ ಯಾದವ ಲೇಫ್ಟಿನೆಂಟ್ ಮನೋಜಕುಮಾರ ಪಾಂಡೆ, ರೈಪಲ್ ಮ್ಯಾನ್ ಸಂಜಯಕುಮಾರ ಪಾಂಡೆ, ಸೌರಭ ಕಾಲಿಯಾ ಅನೇಕ ಯೋಧರು ಈ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಹಾಗೆ ನಮ್ಮ ನಾಳೆಗಳಿಗಾಗಿ ತಮ್ಮ ಬದುಕನ್ನೆ ಮುಡುಪಾಗಿಟ್ಟಿರುವ ಹಾಗೂ ದೇಶಕ್ಕಾಗಿ ಪ್ರಾಣವನ್ನೆ ತ್ಯಾಗಮಾಡಿರುವ ನಮ್ಮ ಹೆಮ್ಮೆಯ ಭಾರತೀಯ ವೀರ ಯೋಧರಿಗೆ ನಮ್ಮ ನಮನಗಳನ್ನು ಸಲ್ಲಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯುವ ಭಾರತ ಕಾರ್ಯಕರ್ತರಾದ ವಿನೋದಕುಮಾರ ಮಣೂರ, ಸತೀಶ ಬಾಗಿ, ವಿರೇಶ ಗೊಬ್ಬೂರ, ಸಾಗರ ಗಾಯಕವಾಡ, ಶ್ರೀಶೈಲ ಗಿರಡೇ, ಆನಂದ ಸೇಳೆಕೆ, ರಾಹುಲ ಕಾರಜೋಳ, ಅನಿಲ ಉಪ್ಪಾರ, ಸಚೀನ ಗಾಯಕವಾಡ, ಭೀಮು ಗೋಳಸಂಗಿ, ರಾಜು ಗೋಕಲೆ, ಶ್ರೀಕಾಂತ ಅವಟಿ, ಸಂತೋಷ ಶೀಂಧೆ ಶರತ ಬಿರಾದಾರ, ಮುತ್ತುರಾಜ ಝಳಕಿ, ಶ್ರೀಕಾಂತ ರಾಠೋಡ, ಆನಂದ ಕುಲಕರ್ಣಿ ಹಾಗೂ ರಾಕೇಶ ಗರಸಂಗಿ ಅನೇಕ ಯುವ ಭಾರತ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.