Sir M Vishveshwarayya

ಭಾರತ ದೇಶದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ ಭಗೀರಥ ವಿಜಾಪುರ: ಸ. 15 ನಗರದ ಬಿ.ಎಲ್.ಡಿ.ಇ ಆಸ್ಪತ್ರೆ ಪಕ್ಕದ ಗಚ್ಚಿನಕಟ್ಟಿ ಕಾಲೋನಿಯಲ್ಲಿ ಯುವ ಭಾರತ ಹಾಗೂ ಸ್ವತಂತ್ರ ಯುವಕ ಸೇವಾ ಸಂಘಟನೆ ವತಿಯತಿಂದ ಸರ್.ಎಂ ವಿಶವೇಶ್ವರಯ್ಯ ಅವರ ವಿಶ್ವೇಶ್ವರಯ್ಯ ಜಯಂತಿಯನ್ನು ಆಚರಿಸಲಾಯಿತು. ಸರ್. ಎಂ ವಿಶ್ವೇಶ್ವರಯ್ಯರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಿ ಮಾತನಾಡಿದ ಯುವ ಭಾರತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಉಮೇಶ ಗೋ. ಕಾರಜೋಳ ಮಾತನಾಡುತ್ತಾ, ಸರ್ ಎಂ. ವಿಶ್ವೇಶ್ವರಯ್ಯ ಸಪ್ಟೆಂಬರ್ 15 1860 ರಲ್ಲಿ ಜನಿಸಿದರು ಕನ್ನಡ ನಾಡಿನ ಕಿರ್ತಿ ಪತಾಕಿಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದ ಮಹಾನ್ ಮೇಧಾವಿ ತಂತ್ರಜ್ಞ ಅಮರ ವಾಸ್ತು ಶಿಲ್ಪಿ ಭಾರತದ ಭಾಗ್ಯವಿಧಾತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಭಾರತ ದೇಶದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ ಭಗೀರಥ, ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು, ನೀಡಲು ಶ್ರಮೀಸಿದ, ಸರಸ್ವತಿ ಪುತ್ರ, ಭಾರತ ದೇಶವೆ ಆಂಗ್ಲರ್ ವಿರುದ್ದ ಹೋರಾಟ ಮಾಡುತ್ತಿದ್ದಗ ಅದೇ ಆಂಗ್ಲರನ್ನು ಉಪಯೋಗಿಸಿಕೊಂಡು, ದೇಶದಭಿವೃದ್ಧಿಗೆ ಶ್ರಮಿಸಿದ ಚಾಣಕ್ಯ, ಅತ್ತ ಕಡೆ ಪರಕಿಯರು, ಇತ್ತ ಕಡೆ ದೂರ ದೃಷ್ಟಿಯಿಲ್ಲದ ಸ್ವದೇಶಿಯರ ಸಾಲದೇ ಪ್ರಾಮಾಣಿಕತೆಯಿಲ್ಲದ ಅಧಿಕಾರಿಗಳ ವರ್ಗ ಅವರೆಲ್ಲರನ್ನು ಮಿರಿ ಕಾರ್ಯ ಸಾಧನೆಮಾಡಿದ ಭೀಶ್ಮ ಆಂಗ್ಲರು ತಮ್ಮ ಸಚಿವ ಮಂಡಳಿಯಲ್ಲಿ ನೀಡಿದ ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿ ದೇಶ ಪ್ರೇಮ ಮೇರೆದ ಮಹಾನ್ ದೇಶಭಕ್ತ ಭರತ ಖಂಡಕ್ಕೆ ಇಡೀ ವಿಶ್ವದ ಮನೂಕುಲದ ಉದ್ಧಾರಕ್ಕಾಗಿ ತಮ್ಮನ್ನು ಅರ್ಪಿಸಿದ ವಿಶ್ವಮಾನವ, ಜನಕೋಟಿಯ ಬದುಕು ಬೇಳಗಿಸಿದ ಕಾಯಕ ಯೋಗಿ ಆಧುನಿಕತೆಯ ನೇತಾರ, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಆ ದಿವ್ಯ ಚೇತನವನ್ನು ವರ್ಣಿಸಲು ಪದಗುಚ್ಚಗಳೆ ಸಾಲದು, ಸರಳತೆ, ಸೌಜ್ಯನೆತೆ, ಗೌರವ, ದೇಶಭಕ್ತಿ ಸಮಚ್ಚಿತ ಮನಸ್ಸು ಇವೆಲಕ್ಕು ಸಮನಾರ್ಥಕ ಪದವೇ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸ್ವತಂತ್ರ ಯುವಕ ಸೇವಾ ಸಂಘದ ಅಧ್ಯಕ್ಷರಾದ ಪ್ರಭು ಕಂಬಿಮಠ, ವಿನೋದಕುಮಾರ ಮಣೂರ, ವಿರೇಶ ಗೊಬ್ಬುರ, ಗಿರಿಶ ಕುಲಕರ್ಣಿ, ಶ್ರೀಶೈಲ ಗೇರೆಡೆ, ಸಂತೋಷ ಝಳಕಿ, ವಿಶ್ವನಾಥ ತೆಲಸಂಗ, ಸಚ್ಚಿನ ಗಾಯಕವಾಡ, ಮುತ್ತು ಝಳಕಿ, ಭೀಮು ಗೋಳಸಂಗಿ, ಮುತ್ತು ಮಸಳಿ, ಮಾಂತೇಶ ಮುಧಡಗಿ, ರಾಜು ಗುಗ್ಗರಿ, ಸುನಿಲ ಕ್ಷಿರಸಾಗರ, ಶ್ರೇಷ್ಟಾ ಬಿರಾದಾರ, ಮಹೇಶ ದೊಡ್ಡಿ, ಸಿದ್ರಾಯ ಬುರುಕುಲೆ, ಮಲ್ಲಯ್ಯ ಮಠ, ಪ್ರಶಾಂತ ಮಠ, ಮಹಿಬೂಬ ಸಾಲದಾರ, ಹಾಗೂ ಅಕ್ಷೆಯ ಸಗರಿ, ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.